ಕಲ್ಪನೆ ಮತ್ತು ವಾಸ್ತವ
ನೀ ನನ್ನ ಪ್ರೀತಿಸಿದ್ದು
ನಿನ್ನನ್ನು ನೀನೇ ಪ್ರಿತಿಸಿದಂತೆ
ನನ್ನೆಲ್ಲವು ನೀನಾದದ್ದು
ನನ್ನೆದೆಯ ತಾಳಕ್ಕೆ
ಪ್ರೇಮರಾಗ ಹಾಡಿಸಿದ್ದು
ನನಗಿನ್ನೂ ನೆನಪಿದೆ.
ಸೂರ್ಯ ರಂಗಾದ ಹೊತ್ತು
ನೀನು ಬಂದೆ
ನವ್ಯತೆಯ ಸಿಂಚನವಿಲ್ಲ
ರಂಗಿನ ಸೊಬಗೂ ಇರಲಿಲ್ಲ
ಪರಿಪೂರ್ಣತೆಯ ನೀನು
ನೀನೇ ಆಗಿದ್ದೆ
ಭವಿಷ್ಯದ ಕನಸುಗಳಲ್ಲಿ
ನನಗೆ ನಂಬಿಕೆ ಇರಲಿಲ್ಲ
ಆದರೂ ನಾ ನಿನ್ನ ಬಯಸಿದೆ,
ಯಾವದಕ್ಕಾಗಿಯೋ ಏನೋ
ನನ್ನೊಳಗೆ ಪ್ರೀತಿಸಿದೆ
ಅಲ್ಲಿ ನಿವೇದನೆ ಇರಲಿಲ್ಲ
ಸುಪ್ತವಾದ ಬಯಕೆಗಳೆಲ್ಲ
ನನ್ನಲ್ಲಿಯೇ ಸ್ತಬ್ಧವಾಗಿ
ಹೆಪ್ಪುಗಟ್ಟಿದ ಮೌನದೊಂದಿಗೆ
ಕಣ್ಣನೋಟದ ಭಾಷೆಯೊಳಗೆ
ಲೀನವಾಗುತ್ತಿದ್ದೆವೇನೋ?
ವಾಸ್ತವದ ಸೆಳೆತದಲ್ಲಿ
ಬಯಕೆಗಳ ಸ್ಪಂದನದ
ರಾಗ ತಾಳಗಳಿಗೆ
ಭಾವದ ಸಂಗಮವಾಗಿತ್ತು
ಹಿತವಾದ ಅನುಭವದಲ್ಲಿ
ಶಾಶ್ವತ ಬದುಕಿನ ಕನಸಿತ್ತು
ಕಾಲದ ಕ್ಷಣ.....
ನಿಶ್ಚಲವಾಗಲಿ ಎನ್ನುವ
ಅದಮ್ಯವಾದ ಹಂಬಲವಿತ್ತು
ಜೇನಿಗಿಂತಲೂ ಮಿಗಿಲಾದ
ನವಿರಾದ ಕಂಪನದೊಂದಿಗಿನ
ಬಯಕೆಯ ಹಸಿವಿತ್ತು
ಅದು ಚಿರಂತನವಾಗಿತ್ತು
ಘಾಡವಾದ ಕನಸ ಮುತ್ತು
ಒಡೆದು ತಿಳಿಯಾಗಿ
ಕಣ್ಬಿಟ್ಟಾಗ ಪಕ ಪಕನೆ
ನಗುವ ಬೆಳ್ಳಿ ಚುಕ್ಕೆ
ನನ್ನ ಆಶೆಗಳೆಲ್ಲ
ಕನಸಾಗಿಯೇ ಉಳಿಯುತ್ತವೆ ಏನೋ
ಅಂದು ಅನ್ನಿಸಿದಾಗ ನಾನು..
ನಿರಾಶೆಯ ನೋವಲ್ಲಿ ಬೆಂದದ್ದು
ನಿನಗೆಲ್ಲಿ ಗೊತ್ತಿತ್ತು?...........
ಸೋಮವಾರ, ಅಕ್ಟೋಬರ್ 25, 2010
ಮಂಗಳವಾರ, ಅಕ್ಟೋಬರ್ 19, 2010
ಕಪ್ಪು ಮೋಡದಲ್ಲಿ
ಗುಡುಗು ಸಿಡಿಲು,
ಒಡೆದು ಹೋಗಲಿ
ಒಡಲ ಕಡಲು,
ಸಿಗುವದಾದಲ್ಲಿ
ನಿನ್ನ ಮಡಿಲು,
ಬತ್ತಿದ ಎದೆಯಲ್ಲಿ
ಹರ್ಷದಾ ಹೊನಲು.
ಗುಡುಗು ಸಿಡಿಲು,
ಒಡೆದು ಹೋಗಲಿ
ಒಡಲ ಕಡಲು,
ಸಿಗುವದಾದಲ್ಲಿ
ನಿನ್ನ ಮಡಿಲು,
ಬತ್ತಿದ ಎದೆಯಲ್ಲಿ
ಹರ್ಷದಾ ಹೊನಲು.
ಭಾನುವಾರ, ಅಕ್ಟೋಬರ್ 17, 2010
ಏನೆಂದು ಬರೆಯಲಿ ಕವನ
ಸುಪ್ತ ಮನದಲ್ಲಿ ಅಡಗಿರುವದನ್ನ
ಎದೆ ಹೊಕ್ಕು ನೋಡೋಮ್ಮೆ ನನ್ನ
ಅಣು ಅಣುವಿನಲ್ಲಿರುವ ನಿನ್ನ
ಅಲ್ಲಿ ನೀನೇ ಒಂದು ಕವನ
ನನ್ನ ಪ್ರಾಣದಿರುವಿನ ಪವನ.
ನಮ್ಮ ಒಲವ ಬಂಧನ,
ಸತ್ಯ ನಿತ್ಯ ನೂತನ.
ಬಣ್ಣ ಬಣ್ಣದ ಕವನ
ಅಳಸಿ ಹೋಗದೆ ಚೇತನ?
ಎದೆಯ ಬಸಿರಿನ ಸ್ಪಂದನ
ನವ್ಯತೆಯ ಸಿಂಚನ ಚಿರಂತನ.
ಇದು ನನ್ನವನು ನನಗಾಗೇ ಬರೆದ ಕವನ
ಸುಪ್ತ ಮನದಲ್ಲಿ ಅಡಗಿರುವದನ್ನ
ಎದೆ ಹೊಕ್ಕು ನೋಡೋಮ್ಮೆ ನನ್ನ
ಅಣು ಅಣುವಿನಲ್ಲಿರುವ ನಿನ್ನ
ಅಲ್ಲಿ ನೀನೇ ಒಂದು ಕವನ
ನನ್ನ ಪ್ರಾಣದಿರುವಿನ ಪವನ.
ನಮ್ಮ ಒಲವ ಬಂಧನ,
ಸತ್ಯ ನಿತ್ಯ ನೂತನ.
ಬಣ್ಣ ಬಣ್ಣದ ಕವನ
ಅಳಸಿ ಹೋಗದೆ ಚೇತನ?
ಎದೆಯ ಬಸಿರಿನ ಸ್ಪಂದನ
ನವ್ಯತೆಯ ಸಿಂಚನ ಚಿರಂತನ.
ಇದು ನನ್ನವನು ನನಗಾಗೇ ಬರೆದ ಕವನ
ಶನಿವಾರ, ಅಕ್ಟೋಬರ್ 2, 2010
kanasugale hage
ಕನಸುಗಳೇ ಹಾಗೆ,
ಯಾವಾಗ, ಹೇಗೆ, ಬರುತ್ತವೆ ಅಂತ ಹೇಳಲಾಗುವದಿಲ್ಲ.
ಈ ವಯಸ್ಸಿಗೆ ಹೀಗೆ ಬರಬೇಕು ಅಂತ ಇಲ್ಲ.
ನನಗೋ ಎರಡು ಮಕ್ಕಳು, ಆದ್ರೆ ಮಗುವಾಗಿರುವ ಕನಸು.........
ಮುಖವಾಡದ ಜನರ ನಡುವೆ ಇರಲಾಗುವದಿಲ್ಲ.
ಮನಸಿಗನಸಿದ್ದನ್ನು ಹೇಳಿದರೆ ಬದುಕಲಾದೀತೆ?
ಉಳಿದ ಕನಸುಗಳನ್ನು ಇನ್ನೊಮ್ಮೆ ಹೇಳುವೆ................
ಯಾವಾಗ, ಹೇಗೆ, ಬರುತ್ತವೆ ಅಂತ ಹೇಳಲಾಗುವದಿಲ್ಲ.
ಈ ವಯಸ್ಸಿಗೆ ಹೀಗೆ ಬರಬೇಕು ಅಂತ ಇಲ್ಲ.
ನನಗೋ ಎರಡು ಮಕ್ಕಳು, ಆದ್ರೆ ಮಗುವಾಗಿರುವ ಕನಸು.........
ಮುಖವಾಡದ ಜನರ ನಡುವೆ ಇರಲಾಗುವದಿಲ್ಲ.
ಮನಸಿಗನಸಿದ್ದನ್ನು ಹೇಳಿದರೆ ಬದುಕಲಾದೀತೆ?
ಉಳಿದ ಕನಸುಗಳನ್ನು ಇನ್ನೊಮ್ಮೆ ಹೇಳುವೆ................
ಗುರುವಾರ, ಸೆಪ್ಟೆಂಬರ್ 30, 2010
nannavanu
ಬಿಸಿಲಿಗೆ ಕರಗಿದ ತುಷಾರದಂತೆ,
ನಾ ಕರಗಿ ಹೋದೆ,
ಕಣ್ಣಂಚಿನ ನೋಟಕೆ,
ಕಲ್ಲು ಹೃದಯ ಕರಗಿ,
ನನ್ನೊಳು ನೀನಾವರಿಸಿದಂತೆ,
ಹೆಪ್ಪುಗಟ್ಟಿದ ಮೌನ,
ಒಡೆದು ಹೋಗುವ ಮುನ್ನ,
ನೀನು ನಾನಾದೆ, ನಾನು ನೀನಾದೆ.
ನಾ ಕರಗಿ ಹೋದೆ,
ಕಣ್ಣಂಚಿನ ನೋಟಕೆ,
ಕಲ್ಲು ಹೃದಯ ಕರಗಿ,
ನನ್ನೊಳು ನೀನಾವರಿಸಿದಂತೆ,
ಹೆಪ್ಪುಗಟ್ಟಿದ ಮೌನ,
ಒಡೆದು ಹೋಗುವ ಮುನ್ನ,
ನೀನು ನಾನಾದೆ, ನಾನು ನೀನಾದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)